12th June 2025

ಚಡಚಣ;ಚಡಚಣ ತಹಶೀಲ್ದಾರ್ ಕಚೇರಿಯಲ್ಲಿ ನೂತನವಾಗಿ ಆಹಾರ ನಿರೀಕ್ಷಕ ಅಂತ ಶಿವಾನಂದ ಕೋಳಿ ಇವರು ಪ್ರಭಾರಿಯಾಗಿ ಚಾರ್ಜನ್ನು ವಹಿಸಿಕೊಂಡಿರುವುದರಿAದ ಸದರಿಯರನ್ನು ಸನ್ಮಾನಿಸಲಾಯಿತು.
ಕಲ್ಮೇಶ್ ವಾಗ್ಮೋರೆ, ರುದ್ರೇಶ್ ಬನಸೋಡೆ ಶಾಲು ಹೊದಿಸಿ, ಹಾರು ಹಾಕಿ ಸನ್ಮಾನಿಸಿದರು.
ನಂತರ ಮಾತನಾಡಿದ ಚಡಚಣ ಗ್ರೇಡ್ ೨ ತಹಶೀಲ್ದಾರ್ ಆರ್ ಎಸ್ ಚೌಹಾಣ್ ರವರು ಮಾತನಾಡಿ ಬಡ ಹಾಗೂ ನಿರ್ಗತಿಕ ಜನರ ಸೇವೆಗಾಗಿ ತಮ್ಮನ್ನು ಆಹಾರ ನಿರೀಕ್ಷಕ ಅಂತ ನೇಮಿಸಿದ್ದು ತಮ್ಮ ಸೌಭಾಗ್ಯವಾಗಿದ್ದು ಜನ ಸೇವೆಯೆ ಜನಾರ್ಧನ ಸೇವೆ ಅಂತ ತಿಳಿದು ಬಡ ಹಾಗೂ ನಿರ್ಗತಿಕರಿಗೆ ಅನ್ಯಾಯವಾಗದಂತೆ ತ್ವರಿತ ಗತಿಯಲ್ಲಿ ಸೇವೆಸಲ್ಲಿಸಿ ರೇಶನ್ ಕಾರ್ಡ ಬಡವರಿಗೆ ವಿತರಿಸಿ ಬಡವರ ಗೌರವಕ್ಕೆ ಪಾತ್ರರಾಗಿರಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪ ತಹಶೀಲದಾರರು ಕೆ ವೈ ಹೊಸಮನಿ,ಕಲ್ಮೇಶ್ ವಾಗ್ಮೋರೆ,ರುದ್ರೇಶ್ ಬನಸೋಡೆ,ರವಿ ಕಾಂಬಳೆ ರೇವುತಂಗವ, ಸಂಜು ಬೆಳ್ಳೆನವರ,ಶಾಕಿರ್ ಮುಲ್ಲಾ ಮರಗೂರ, ಶಿವರಾಜ್ ಶಿವಶರಣ,ಸುಭಾಸ್ ಗಾಯಕವಾಡ ಇನ್ನಿತರರು ಇದ್ದರು.

ಸಾಮಾಜಿಕ ನಾಟಕಗಳನ್ನು ನೋಡಿ ಹೆಚ್ಚು ಪ್ರೋತ್ಸಾಹಿಸಿ : ಉಪನ್ಯಾಸಕ ಸಿಎಂ ಚನ್ನಬಸಯ್ಯಸ್ವಾಮಿ ಅಭಿಪ್ರಾಯ

ಶ್ರೀಶೈಲಗಿರಿ ಪ್ರಕಾಶನ ಬೆಳಗಾವಿ ರವರಿಂದ ಸಾಹಿತಿ ಬಿ.ಕೆ. ಮಲಾಬಾದಿಯವರ ಕೃತಿ ಲೋಕಾರ್ಪಣೆ - ಜೀವನದ ಆದರ್ಶಗಳನ್ನು ಒತ್ತಿ ಹೇಳುವ ಕೃತಿಗಳು ಎಲ್ಲರಿಗೂ ಮಾರ್ಗದರ್ಶಿ-- -ಎಸಿಪಿ ನಾರಾಯಣ ಬರಮನಿ ಅಭಿಮತ